     ಇದು ಪ್ರೂಫ್  ರೀಡಿಂಗ್  ಆಗಬೇಕಾದ ಪುಟ ; ನಂತರ ಈ ಸಾಲನ್ನು ತೆಗೆದುಬಿಡಿ

ಕರ್ಣ (ಜ್ಯಾಮಿತಿ): ಸರಳರೇಖೆಗಳಿಂದ ಆವೃತವಾದ ಒಂದು ಬಹುಭುಜಾಕೃತಿಯಲ್ಲಿ ಆಸನ್ನವಲ್ಲದ (ನಾನ್ಅಡ್ಜೆಸೆಂಟ್) ಯಾವುದೇ ಎರಡು ಶೃಂಗಗಳನ್ನು ಜೋಡಿಸುವ ಸರಳರೇಖೆ (ಡಯಗೊನಲ್). ನಾಲ್ಕು ಅಥವಾ ಹೆಚ್ಚು ಭುಜಗಳಿರುವ ಬಹುಭುಜಗಳಿಗೆ ಮಾತ್ರ ಕರ್ಣಗಳಿವೆ. ಒಂದು ಟಿ-ಭುಜದಲ್ಲಿನ ಕರ್ಣಗಳ ಸಂಖ್ಯೆ 
ಟಿಅ೨ – ಟಿ = ಳಿಟಿ (ಟಿ – ೩)
ಆದ್ದರಿಂದ ಒಂದು ಚತುರ್ಭುಜದಲ್ಲಿ ೨, ಪಂಚಭುಜದಲ್ಲಿ ೫, ಷಡ್ಭುಜದಲ್ಲಿ ೯, ಇತ್ಯಾದಿ ಕರ್ಣಗಳಿವೆ.
ಂಃಅಆ ಒಂದು ಆಯತವಾದರೆ ಂಅ, ಃಆಗಳು ಅದರ ಎರಡು ಕರ್ಣಗಳು ಇವುಗಳಲ್ಲಿ ಪ್ರತಿಯೊಂದೂ ಆ ಆಯತವನ್ನು ಎರಡು ಸರ್ವಸಮ ಲಂಬಕೋನ ತ್ರಿಭುಜಗಳಾಗಿ ವಿಭಾಗಿಸುತ್ತವೆ (ಂಅ ಯಾದರೆ ಆಂಅಆ, ಆಂಅಃ; ಃಆ ಯಾದರೆ ಆಃಆಂ, ಆಃಆಅ). ಈ ತ್ರಿಭುಜಗಳನ್ನು ಕುರಿತು ಪ್ರಸ್ತಾಪಿಸು ವಾಗ ಂಅ ಮತ್ತು ಃಆಗಳನ್ನು ವಿಕರ್ಣ ಗಳೆಂದು (ಹೈಪಾಟಿನ್ಯೂಸಸ್) ಕರೆಯುವುದು ವಾಡಿಕೆ. 
ಒಂದು ಚತುರ್ಭುಜವನ್ನು (ಇದೇ ರೀತಿ ಬಹುಭುಜಗಳನ್ನು ಸಹ) ಎರಡು ಭಿನ್ನದೃಷ್ಟಿಕೋನಗಳಿಂದ ಪರಿಶೀಲಿಸಬಹುದು. 
ಮೊದಲನೆಯದರಲ್ಲಿ ಬಿಂದುಗಳಿಂದ ಪ್ರಾರಂಭಿಸಿ ಮುಂದುವರಿಯುತ್ತೇವೆ. ಂ, ಃ, ಅ, ಆಗಳು ನಾಲ್ಕು ಸಮತಲೀಯ, ಇವುಗಳ ಪೈಕಿ ಯಾವ ಮೂರೂ ಏಕರೇಖಸ್ಥವಲ್ಲದ, ಬಿಂದುಗಳು. ಇವು ಒಟ್ಟು ಆರು ಸರಳರೇಖೆಗಳನ್ನು ರಚಿಸುತ್ತವೆ:
                              ಚಿ: ಂಃ; b: ಃಅ; ಛಿ: ಅಂ
                            ಚಿ’: ಅಆ; b’: ಂಆ; ಛಿ’: ಃಆ
ಇವು ಆವೃತಿಸುವ ಒಟ್ಟು ಚಿತ್ರದ ಹೆಸರು ಸಂಪೂರ್ಣ ಚತುಷ್ಕೋನ (ಕಂಪ್ಲೀಟ್ಕ್ವಾಡ್ರೇಂಗಲ್), ಚಿ, ಚಿ’; b, b’; ಛಿ, ಛಿ ಇದರ ಒಂದೊಂದು ಜೊತೆ ಎದುರು ಭುಜಗಳು. ಇವು ಸಂಧಿಸುವ ಬಿಂದುಗಳು ಹೀಗಿವೆ;
                            ಇ : ಚಿ, ಚಿ’ ; ಈ : b, b’ ; ಉ : ಛಿ, ಛಿ’
ಇ,ಈ,ಉಗಳಿಗೆ ಕರ್ಣಬಿಂದುಗಳೆಂದೂ ಅವು ರಚಿಸುವ ಇಈಉಗೆ ಕರ್ಣಬಿಂದು ತ್ರಿಕೋನ (ಡಯಗೊನಲ್ ಪಾಯಿಂಟ್ ಟ್ರ್ಯಾಂಗಲ್) ಎಂದೂ ಹೆಸರು.
ಎರಡನೆಯದರಲ್ಲಿ ಸರಳರೇಖೆಗಳಿಂದ ಪ್ರಾರಂಭಿಸಿ ಮುಂದುವರಿಯುತ್ತೇವೆ. ಚಿ,b,ಛಿ,ಜ ಗಳು ನಾಲ್ಕು ಸಮತಲೀಯ, ಇವುಗಳ ಪೈಕಿ ಯಾವ ಮೂರು ಏಕ ಬಿಂದುಸ್ಥವಲ್ಲದ, ಸರಳರೇಖೆಗಳು. ಇವು ಒಟ್ಟು ಆರು ಬಿಂದುಗಳನ್ನು ರಚಿಸು ತ್ತವೆ.
		ಂ : ಜ,ಚಿ ; ಃ : ಚಿ,b ; ಅ: b,ಜ;
		ಂ’ : b, ಛಿ ; ಃ’ : ಛಿ,ಜ ; ಅ’ : ಛಿ,ಚಿ
ಇವು ಆವೃತಿಸುವ ಒಟ್ಟು ಚಿತ್ರದ ಹೆಸರು ಸಂಪೂರ್ಣ ಚತುರ್ಭುಜ (ಕಂಪ್ಲೀಟ್ ಕ್ವಾಡ್ರಿಲೇಟರಲ್). ಂ, ಂ’; ಃ, ಃ’; ಅ, ಅ’ ಇದರ ಒಂದೊಂದು ಜೊತೆ ಎದುರು ಶೃಂಗಗಳು. ಇವನ್ನು ಜೋಡಿಸುವ ಸರಳರೇಖೆಗಳು ಹೀಗಿವೆ:
		e: ಂಂ’, ಜಿ : ಃಃ’, g : ಅಅ’
e,ಜಿ,g ಗಳಿಗೆ ಕರ್ಣರೇಖೆಗಳೆಂದೂ ಅವು ಆವೃತಿಸುವ ತ್ರಿಭುಜಕ್ಕೆ (ಆPಕಿಖ) ಕರ್ಣ ರೇಖಾ ತ್ರಿಭುಜ (ಡಯಗೊನಲ್ ಲೈನ್ ಟ್ರೈಲೇಟರಲ್) ಎಂದೂ ಹೆಸರು. (ಸಿ.ಎನ್.ಎಸ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ